`ನಾಗರಕಟ್ಟೆ` ೫೦ಭಾಗ ಮುಕ್ತಾಯ
Posted date: 16 Sat, May 2015 – 08:55:40 AM

ಶ್ರೀ ಸಾಯಿ ವೆಂಕ್ಚರ‍್ಸ್ ಲಾಂಛನದಲ್ಲಿ ನಾಗರಕಟ್ಟೆ ಚಿತ್ರದ ಚಿತ್ರೀಕರಣ ತಾವರೆಕೆರೆಯ ಭೂತಬಂಗಲೆಯಲ್ಲಿ  ನಿರ್ಮಿಸಿದ್ದ ಸೆಟ್‌ನಲ್ಲಿ  ಅನಿಶ್, ಸುಚೀಂದ್ರ ಪ್ರಸಾದ್, ದ್ವಾರಕೀಶ್, ಅವಿನಾಶ್, ಶರತ್ ಲೋಹಿತಾಶ್ವ, ಶ್ರಾವ್ಯ ಅಭಿನಯಿಸಿದ ದೃಶ್ಯಗಳ ಚಿತ್ರೀಕರಣದಲ್ಲಿ ೩೦ ಲಕ್ಷ ರೂಪಾಯಿಗೆ ಹಾಕಿದ್ದ ಸೆಟ್ ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಸೆಟ್ಟೆಲ್ಲಾ ಹಾನಿಯಾಗಿದ್ದು, ಈಗ ಪುನರ್ ನಿರ್ಮಾಣ ಮಾಡಿ ಚಿತ್ರೀಕರಣ ನಡೆದಾಗ ಹಿರಿಯ ನಟರುಗಳ ಪ್ರಶಂಸೆ ನಿರ್ದೇಶಕನ ಕೆಲಸಕ್ಕೆ ಭೇಷ್ ಎಂದರು.  ಇದರಲ್ಲಿ ನೂರು ಜನ ಜೂನಿಯರ‍್ಸ್‌ನ ಇಟ್ಕೊಂಡು ಮಾಡಿದ ದೃಶ್ಯ ಚಾಂಲೆಂಜ್ ಆಗಿತ್ತು. ಎಲ್ಲರ ಸಹಕಾರ ಮರೆಯಲು ಸಾಧ್ಯವಿಲ್ಲ. ಶ್ರಾವ್ಯಾಳ ಮೊದಲ ದೃಶ್ಯದಲ್ಲಿ ಸತ್ತಹೆಣವಾಗಿ ತೋರಿಸದಬೇಕಾಗಿತ್ತು ಶ್ರಾವ್ಯಾಳಿಗೆ ಶಾಕ್ ಆಯ್ತು.  ನನ್ನ ಜೀವನದಲ್ಲಿ ಮರೆಯಲಾಗದ ಒಂದು ವಿಷ್ಯ ಇದು ಅನ್ಸುತ್ತೆ.  ಮುಂದಕ್ಕೆ ಆಗುತ್ತೋ ಇಲ್ವೋ ಮೊದಲ ದಿನವೇ ನನ್ನನ್ನ ಸತ್ತ ಹೆಣವಾಗಿ ತೋರ‍್ಸಿದಿರಿ ಎಂದರು. ನಾಲ್ಕು ಕ್ಯಾಮೆರಾ, ಜಿಮ್ಮಿ, ಪ್ರೊಪೈಲರ್ ಬಳಸಿ ಹೊಸ ರೀತಿಯ ಫೈಟೊಂದನ್ನು ವಿಕ್ರವನ್ ಮೋರ್  ಎಂಬ ಸಾಹಸ ನಿರ್ದೇಶಕ ಕಂಪೋಸ್ ಮಾಡಿದ್ದಾರೆ.  ಸುಮಾರು ೬ ತಿಂಗಳ ಮೈ ಹುರಿಗೊಳಿಸಿ ಸಿಕ್ಸ್ ಪ್ಯಾಕ್ ರೆಡಿ ಮಾಡಿಕೊಂಡು ಮಾಸ್ ಇಮೇಜ್ ಬೆಳೆಸಿಕೊಳ್ಳುವ ಮೂಲಕ ಲುಕ್ಕು, ಸ್ಟೈಲ್ ಎಲ್ಲಾ  ಅನಿಷ್‌ಗೆ ಹೊಸ ಬೆಳವಣಿಗೆಯತ್ತ ಹೊರಟಿದ್ದಾರೆ. ಈ ಚಿತ್ರಕ್ಕೆ  ಕಥೆ-ಚಿತ್ರಕತೆ-ಸಂಭಾಷಣೆ-ನಿರ್ದೇಶನ - ಶಂಕರ್, ಇವರು ಈ ಹಿಂದೆ ೧೮ನೇ ಕ್ರಾಸ್ ಚಿತ್ರ ನಿರ್ದೇಶಿಸಿದ್ದರು, ಚಿತ್ರದ ಛಾಯಾಗ್ರಹಣ-ಸುರೇಶ್ ಬಾಬು, ಸಂಗೀತ- ಅರ್ಜುನ್ ಜನ್ಯ, ಸಾಹಿತ್ಯ- ಯೋಗರಾಜಭಟ್, ಕೆ. ಕಲ್ಯಾಣ್, ಸಂಕಲನ- ವಿಕಯ್ ಎಂ ಕುಮಾರ್, ನೃತ್ಯ - ಮದನ್ ಹರಿಣಿ, ಕಲೆ-ಮುರಳಿ, ಸಾಹಸ -ವಿಕ್ರಮ್,  ಸಹನಿರ್ದೇಶನ - ಉಮೇಶ್.ಎಸ್.ಎಸ್, ಸಹಾಯಕರು-ಕಷ್ಟಾರ್ಜುನ, ಗಿರೀಶ್, ಕಲೆ-ಆನಂದ್, ನಿರ್ವಹಣೆ-ಸುಂದರಂ, ತಾರಾಗಣದಲ್ಲಿ - ಅನೀಶ್ ತೇಜೇಶ್ವರ್, ನಿಹಾರಿಕಾ, ಶ್ರಾವ್ಯ, ದ್ವಾರ್ಕೀಶ್, ಅವಿನಾಶ್, ಶರತ್ ಲೋಕಿತಾಶ್ವ, ಚಿಕ್ಕಣ್ಣ, ಗಿರಿ ದಿನೇಶ್, ರಾಕ್ ಲೈನ್ ಸುಧಾಕರ್, ಕರಿಸುಬ್ಬು, ಮಿಮಿಕ್ರಿ ದಯಾನಂದ್, ಸುಚೇಂದ್ರ ಪ್ರಸಾದ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed